ಮರಿತೆಯಾ..


ಮುರಿದಿರುವುದು ಮಾಳಿಗೆ
ಕಳಚಿರ ಬಹುದು ರಭಸದ ಮಳೆ ನೀರಿಗೆ
ಹಸಿರು ಮೈ ಚಾಚಿದೆ ಸುಡುವ ಸೂರಿಗೆ
ದ್ರೋಹ ಮಾಡಿರುವುದಾದರು ನಾ ಯಾರಿಗೆ..?

ಭದ್ರವಾಗಿ ಬಿಗಿದಪ್ಪಿ ಬೆಚ್ಚನ್ನೆ ಇಡುತ್ತಿದೆ ನಾನು
ಕೈ ಸೋತು ಬಿದ್ದಾಗ ನೋಡದೆ ಹೋದೆ ನೀನು
ಕಣ್ಣಿಟ್ಟು ಕಾಯ್ದಿರುವುದಕ್ಕಾದರು ಕರುಣೆ ಇಲ್ಲವೇನು
ನಾ ನಿನಗೆ ದ್ರೋಹ ಮಾಡಿರುವುದಾದರು ಏನು...?

ಕನ್ನಡಿ ವರಗಿಸಿದ ಕಿಟಕಿಯ ಗೋಡೆ ಮುರಿದಿದೆ
ಭರ್ರನ್ನೆ ಬೀಸಿದ ಗಾಳಿಗೆ ಬಾಗಿಲು ಹೊಡೆದಿದೆ
ಹಾವು ಹುಳಗಳು ಮೆಲ್ಲನೆ ಒಳ ಸೇರಿದೆ
ಭಯವಾಗುತ್ತಿದೆ..ನೀ ಬರದೆ ಇರುವಂತಹ ತಪ್ಪು
ನಾನೇನು ಮಾಡಿದೆ...?

ಮೈ ತೂಳೆದು,ತಿಳಿರು ಬಿಗಿದು ರಂಗೋಲಿ ಇಡುವವರಿಲ್ಲ
ಕಣ್ ಕಟ್ಟಾಟ ಆಡಿದಾಗ ಬಂದು ಅಡಗಿ ಕೂಳ್ಳುವವರಿಲ್ಲ
ಊರು ಹಬ್ಬ ಬಂದರು ಬಂಧುಗಳು ಇಣುಕುವವರಿಲ್ಲ
ಇಷ್ಟಾದರೂ ಅಳದೆ ತಡಿದಿರುವೆ ನೀ ಮಾಡಿರುವುದೂ ಸರಿಯೇ ಇಲ್ಲ...

ಆಗುತ್ತಿಲ್ಲ,, ಉಸಿರು ಕಟ್ಪಿದ್ದಂತಾಗುತಿದೆ ನನಗೆ‌‌..
ಕೊರಗಿ ಕೊರಗಿ ಸಾಯುವೆನು ನಾ ಕೊನೆಗೆ
ಮರೆತೆಯ ಮೌಲ್ಡ್ ಬಂದಮೇಲೆ ಎಂಚಿನ ಮಾಳಿಗೆ
ಮಾಡದಿರು ನನಗೆ ಮಾಡಿದ ಹಾಗೆ ಇನ್ಯಾರಿಗೆ






Comments

Post a Comment