Posts

Showing posts from January, 2022

ಡಾ ದೇವಿ ಶೆಟ್ಟಿ ಅವರ ಆರೋಗ್ಯದ ಮಾತು ಬಹು ಉಪಯುಕ್ತ ಎನಿಸಿತು (ಎಲ್ಲವು ಬೇಕು ಆದರೇ ಮಿತವಾಗಿ)

Image
ಬೆಂಗಳೂರಿನ ನಾರಾಯಣ ಹೃದಯಾಲಯದ ನಿರ್ದೇಶಕರು ಹಾಗೂ ವಿಶ್ವದ ಅಗ್ರಮಾನ್ಯ ಹೃದಯತಜ್ಞರಲ್ಲಿ ಒಬ್ಬರಾದ ಡಾ ದೇವಿಶೆಟ್ಟಿ ಯವರ ಸಂದೇಶ.. "ನನ್ನೆಲ್ಲಾ ಮಿತ್ರರೇ... ಇತ್ತೀಚಿನ ಕೆಲ ವರ್ಷಗಳಿಂದ ನಾನು, ನನಗೆ ವೈಯಕ್ತಿಕವಾಗಿ ತೀರಾ ಪರಿಚಿತರಿದ್ದ 8-10 ಜನರನ್ನು ಕಳೆದು ಕೊಂಡಿದ್ದೇನೆ.. ಅದರಲ್ಲೂ  40 ರ ಆಸುಪಾಸಿನಲ್ಲಿದ್ದ ಕೆಲ ಸೆಲೆಬ್ರಿಟಿಗಳು 'ಫಿಟ್ ' ಆಗಿರಲು ಅತೀ ಹೆಚ್ಚು ಶ್ರಮಿಸಿ ಮರಣಿಸಿದ್ದಾರೆ.. ಆದರೆ ಅವರೆಲ್ಲಾ ಕೇವಲ ಫಿಟ್ ಆಗಿರುವಂತೆ,  ಸಿಕ್ಸ್ ಪ್ಯಾಕ್ ಹೊಂದಿರುವಂತೆ ಕಾಣುತ್ತಿದ್ದರಷ್ಟೆ.... ಇಂದು ಆ ಪಟ್ಟಿಗೆ ಪುನೀತ್ ರಾಜ್ ಕುಮಾರ್ ಸೇರ್ಪಡೆಯಾಗಿದ್ದಾರೆ. ಜೀವನದಲ್ಲಿ ಎಲ್ಲದಕ್ಕೂ 'ಮಿತ' ವೇ ಮಂತ್ರ.. ಸೊನ್ನೆ ಅಥವಾ ನೂರು ಈ ಎರಡರಲ್ಲಿ ಯಾವುದರ ಕಡೆಗಿನ ತೀವ್ರ ತುಡಿತವಿದ್ದರೂ ಅದು ತಪ್ಪು. ಒಂದಿಪ್ಪತು ನಿಮಿಷಗಳ ಕಾಲದ ಮಿತವಾದ ವ್ಯಾಯಾಮ, ಎಲ್ಲವನ್ನೂ ತಿನ್ನುವುದು, ಅತಿ ಪಥ್ಯ ಬೇಕಿಲ್ಲ.. ಕಿವಿ ಹಣ್ಣು.. ಆಲೀವ್ ಎಣ್ಣೆ.. ಇವೆಲ್ಲಾ ಅಲ್ಲ.. ನಿಮ್ಮ ಪೂರ್ವಜರು ಏನೆಲ್ಲಾ ತಿನ್ನುವುದನ್ನು ರೂಢಿ ಮಾಡಿದ್ದಾರೋ ಅಂತಹ ಸ್ಥಳೀಯ, ಆಯಾ ಋತುಮಾನದಲ್ಲಿ ಸಿಗುವ, ನಿಮ್ಮ ಊರಿನಲ್ಲೇ ಲಭ್ಯವಾಗುವ ಎಲ್ಲವನ್ನೂ ಮಿತವಾಗಿ ತಿನ್ನಿ.. ಪೂರ್ಣ ಏಳು ಗಂಟೆಗಳ ನಿದ್ರೆ ಮಾಡಿ.. ನಿಮ್ಮ ದೇಹವನ್ನು ಸ್ಟೀರಾಯ್ಡ್ ಅಥವಾ ಸಾಧನೆ ಹೆಚ್ಚಿಸುವ ಔಷಧಗಳನ್ನು ಸೇವಿಸದೇ ಗೌರವಿಸಿ. ನೀವು ಏನೆಲ್ಲಾ ತಿನ್ನುತ್ತಾ ಬೆಳೆದಿರ...